ಮಂಜಿನ ಮುಸುಕಲ್ಲಿ ಅಯೋಧ್ಯೆ ಶ್ರೀ ರಾಮನ ದರ್ಶನ

Jan 22, 2025 - 06:45
 9
Facebook Join WhatsApp Join Telegram Live

ಮಂಜಿನ ಮುಸುಕಲ್ಲಿ ಅಯೋಧ್ಯೆ ಶ್ರೀ ರಾಮನ ದರ್ಶನ
ಮಂಜಿನ ಮುಸುಕಲ್ಲಿ ಅಯೋಧ್ಯೆ ಶ್ರೀ ರಾಮನ ದರ್ಶನ

NewsPin Desk.

ಬರಹ: ಹರ್ಷವರ್ಧನ ಶೀಲವಂತ, ಪತ್ರಕರ್ತರು.

ಚಳಿಗಾಲದಲ್ಲಿ ಚಳಿಗಾಲದಲ್ಲಿ .. 

ಎಷ್ಟು ಚಳಿ ?! ಎಂದರು..

ಮಳೆಗಾಲದಲ್ಲಿ..

ಎಷ್ಟು ಮಳೆ..?! ಎಂದರು..

ನೀವು ಮೆಚ್ಚುವ ವಸ್ತು.. ಇಲ್ಲಿಲ್ಲ.. ಜೋಕೆ!

ಅಂದವರು ಕವಿ ಕೆ.ಎಸ್.ನ..

ಈ ಅನುಭಾವದ ಮಾತು ನಮ್ಮ ಅನುಭವಕ್ಕೆ ದಕ್ಕದ ಹೊರತು, ತಕ್ಕ ಮಣ್ಣಿನ ತೇವಕ್ಕಾಗಿ ಕಾಯ್ದಿರುವ ಬೀಜವೇ! ಪ್ರಯಾಗ್ ರಾಜ್ ನಲ್ಲಿ ಚಳಿ ತುಸು ಸಹನೀಯ. ಆದರೆ ಶ್ರೀ ರಾಮನ ಅಯೋಧ್ಯೆಯಲ್ಲಿ ಅಬ್ಬಾ..! ಬೆಳಗ್ಗೆ ಮತ್ತು ಸಂಜೆ ಇಬ್ಬನಿ ಸಮೇತ ಶೀತ ಗಾಳಿ. ತೊಟ್ಟ ಬಟ್ಟೆ ಎಲ್ಲ ಹಸಿ.. ಒದ್ದೆ. ಆದರೆ, ವಾರ್ಷಿಕೋತ್ಸವದ ಸಂದರ್ಭದಲ್ಲಿ ಶ್ರೀ ರಾಮನ ಭವ್ಯ ದೇಗುಲ ಮತ್ತು ಶ್ರೀ ರಾಮ ಲಲ್ಲಾ ನ ದರ್ಶನ, ಎಲ್ಲ ಆಯಾಸ ಮೆರೆಸಿ, ಭವ್ಯತೆ ಮತ್ತು ದಿವ್ಯತೆ ತುಂಬಿತ್ತು! ನಯನದಲ್ಲಿ ಅವನ ಮೂರುತಿ ತುಂಬಿ, ಕರ್ಣದಲ್ಲಿ ನಾಮಾಂಮೃತ ತುಂಬಿ..ದಾಗ, ಆ ಭಾವ ಪರವಶತೆಯೇ ಭವದ ಇರುವಿಕೆ ಮರೆಸಿ ಬಿಡುತ್ತದೆ. ಆ ಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಿಲ್ಲ. ಕಾರಣ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯಲು ಪರವಾನಿಗೆ ಇಲ್ಲ. ಮನದುಂಬಿ ಆರತಿ, ಪೂಜೆ ನೋಡಿ, ನಮ್ಮ ಎಷ್ಟೊಂದು ಹಿರಿಯರ ತ್ಯಾಗ, ಬಲಿದಾನ ಮತ್ತು ಶ್ರಮ ಕಣ್ಣು ಕಟ್ಟಿ, ಮಂಜಾದವು. ಸರ್ವಶ್ರೀ ಆಂಜನೇಯ ಶಿರೂರ ಮಾಸ್ತರ್, ಶ್ರೀಕೃಷ್ಣ ಯಾದಪ್ಪನವರ, ಕಾಶಿನಾಥ್ ಮುಸ್ಕಿನ ಕಾಕಾ ಭವ್ಯ ರಾಮ ಮಂದಿರಕ್ಕಾಗಿ ಇಟ್ಟಿಗೆ, ದೇಣಿಗೆ ಸಂಗ್ರಹಿಸಿ, ತಾವು ದುಡಿದ ಹಣವನ್ನು ಕೈಯೆತ್ತಿ ಕೊಟ್ಟು.. ನಿರಾಳವಾಗಿ ಲೋಕ ವ್ಯಾಪಾರ ಮುಗಿಸಿದ ಪರಿ ನೆನೆದು ಆನಂದ ಭಾಷ್ಪ ಜಿನುಗಿದವು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಸಂಖ್ಯಾತ ಪ್ರಚಾರಕರು, ರಾಷ್ಟ್ರ ಭಕ್ತ ಸ್ವಯಂಸೇವಕರ ಕೊಡುಗೆಯ ಮೂರ್ತ ರೂಪವಾಗಿ ಭವ್ಯ ಮಂದಿರ ಕಂಡಿತು. ಅವರ ಮಣ ಭಾರದ ಋಣ ಹೊತ್ತವರು ನಾವು. ಅವರ ಸಂಕಲ್ಪದ ಫಲ ಕಣ್ಣು ತುಂಬಿಕೊಳ್ಳುವ ಭಾಗ್ಯ ಪಡೆದವರು. ಅವರೆಲ್ಲರ ಚಿರ ಸ್ಮೃತಿಗೆ, ಈಗಲೂ ಜೀವನ ವೃತವಾಗಿ ಸ್ವೀಕರಿಸಿ, ದುಡಿಯುತ್ತಿರುವ ಎಲ್ಲ ದೇವ ದುರ್ಲಭ ಪಾದಗಳಿಗೆ ನಮಸ್ಕಾರ, ರಾಷ್ಟ್ರ ಪುರುಷ, ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಮೂಲಕ ಸಲ್ಲಿಸಿದೆವು. ಹಿರಿಯರ ಪುಣ್ಯ ಸಂಚಿತ ಫಲದ ಸಮರ್ಥ ಉತ್ತರದಾಯಿ ಆಗಲು, ಯೋಗ್ಯತೆ ಗಳಿಸುವ ವರವೆಮಗೆ ಕರುಣಿಸುವಂತೆ, ಪ್ರಾರ್ಥಿಸಿದೆವು. ***** ಚಿತ್ರಗಳು ಶ್ರೀ ಹನುಮಾನ್ ಘಡಿ ಮಂದಿರದ ಮುಂದೆ ... 

Join WhatsApp Join Facebook Live Join Telegram

Tags: