ರೈತರು ಬೆಳೆದ ಫಸಲಿಗೆ ನೀರು ಬಿಡುವಂತೆ  : ಮಾಜಿ ಶಾಸಕ ಡಾ.ಅನ್ನದಾನಿ  ಒತ್ತಾಯ

Apr 5, 2025 - 11:57
 2
Facebook Join WhatsApp Join Telegram Live

ರೈತರು ಬೆಳೆದ ಫಸಲಿಗೆ ನೀರು ಬಿಡುವಂತೆ  : ಮಾಜಿ ಶಾಸಕ ಡಾ.ಅನ್ನದಾನಿ  ಒತ್ತಾಯ

NewsPin Desk.

ಮಳವಳ್ಳಿ: ಕಡೇ ಭಾಗದ ರೈತರು ಬೆಳೆದ ಫಸಲಿಗೆ ನೀರು ಬಿಡುವಂತೆ  ಮಾಜಿ ಶಾಸಕ ಡಾ.ಅನ್ನದಾನಿ  ಸರ್ಕಾರವನ್ನು ಒತ್ತಾಯಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,  ಕೆ.ಆರ್.ಎಸ್.ಅಣೆಕಟ್ಟು ನಿಂದ ವಿ.ಸಿ. ನಾಲೆಯ ಕಡೇ ಭಾಗವಾದ ಮಳವಳ್ಳಿ ತಾಲ್ಲೂಕಿನ ರೈತರ ಜಮೀನಿಗೆ  ನೀರು ಸಮಸ್ಯೆ ಪ್ರತಿಶತ ವರ್ಷವೂ ಆಗುತ್ತಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು  ಒಬ್ಬರ ಮೇಲೆ  ಒಬ್ಬರು ಸಬೂಬು  ಹೇಳಿಕೊಂಡು  ರೈತರಿಗೆ ನೀರು ನೀಡಿಲ್ಲ ಎಂದು ಆರೋಪಿಸಿದರು.

ತಾಲ್ಲೂಕಿನ ಹಲವು ಭಾಗದ ರೈತರಿಗೆ ಸಮರ್ಪಕವಾಗಿ ನೀರು ಸಿಗದೆ  ಕಂಗಾಲಾಗಿದ್ದು,
ಕೂಡಲೇ ನಾಲೆ ಮೂಲಕ ರೈತರ ಜಮೀನಿಗೆ ನೀರು ಬಿಡಬೇಕು ಇಲ್ಲದಿದ್ದರೆ ರೈತರ ಜೊತೆಗೂಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಪುರಸಭೆ ಉಪಾಧ್ಯಕ್ಷ ಬಸವರಾಜು, ಚಂದಹಳ್ಳಿ ಶ್ರೀಧರ್, ಸದಾನಂದ, ಕಾಂತರಾಜು, ಪುರಸಭೆ ಸದಸ್ಯ ಸಿದ್ದರಾಜು ಸೇರಿದಂತೆ ಹಲವರು ಇದ್ದರು.

Join WhatsApp Join Facebook Live Join Telegram

Tags: