ರಸ್ತೆಬದಿ ಹಳ್ಳದಲ್ಲಿ ಗಜಪಡೆ ಕೂಲ್ ಕೂಲ್: ವಾಹನ ಸವಾರರು ಥಂಢಾ

Apr 2, 2025 - 20:55
 4
Facebook Join WhatsApp Join Telegram Live

ರಸ್ತೆಬದಿ ಹಳ್ಳದಲ್ಲಿ ಗಜಪಡೆ ಕೂಲ್ ಕೂಲ್: ವಾಹನ ಸವಾರರು ಥಂಢಾ
ರಸ್ತೆಬದಿ ಹಳ್ಳದಲ್ಲಿ ಗಜಪಡೆ ಕೂಲ್ ಕೂಲ್: ವಾಹನ ಸವಾರರು ಥಂಢಾ

NewsPin Desk.

ಚಾಮರಾಜನಗರ: ಬಿಸಿಲ ಬೇಗೆಗೆ ಕಾಡಾನೆಹಿಂಡು ರಸ್ತೆಬದಿಯ ಹಳ್ಳದಲ್ಲೇ ರಿಲ್ಯಾಕ್ಸ್ ಗೆ ಜಾರಿ ಕೂಲ್ ಕೂಲ್ ಎಂದ ಘಟನೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಹನೂರು ತಾಲೂಕಿನ ವಡಕೆಹಳ್ಳ ರಸ್ತೆಯಲ್ಲಿ ನಡೆದಿದೆ.

ಬಿಸಿಲ ಬೇಗೆಗೆ ತತ್ತರಿಸಿದ ಆನೆಗಳ ಹಿಂಡು ರಸ್ತೆಬದಿಯ ಹಳ್ಳದಲ್ಲೇ ಮಿಂದು, ದಣಿವಾರಿಸಿಕೊಂಡು ರಿಲ್ಯಾಕ್ಸ್ ಗೆ ಜಾರಿದ್ದವು. ರಸ್ತೆಬದಿಯೇ ಆನೆಗಳ ಹಿಂಡು ಕಂಡ ವಾಹನ ಸವಾರರು ಹೌಹಾರಿದರು.

ರಿಲಾಕ್ಸ್ ಬಳಿಕ  ಗಜಪಡೆಯು ಒಂದರ ನಂತರ ಒಂದಂತೆ  ರಸ್ತೆ ದಾಟಿದ್ದರಿಂದ ಕೆಲ ಕ್ಷಣ ವಾಹನ ಸವಾರರಿಗೆ ಆತಂಕ  ಸೃಷ್ಟಿಸಿತ್ತು.

ಈ ರಸ್ತೆಯಲ್ಲಿ  ಮಲೆ ಮಹದೇಶ್ವರ ಬೆಟ್ಟಕ್ಕೆ  ಕಾಲ್ಲಡಿಗೆಯಲ್ಲಿ ಹಾಗೂ ವಾಹನಗಳಲ್ಲಿ ಭಕ್ತರು ಸಂಚರಿಸುತ್ತಾರೆ, ತಮಿಳುನಾಡಿಗೂ ತೆರಳುತ್ತಾರೆ. 

ಇತ್ತೀಚಿನ ದಿನಗಳಲ್ಲಿ ಮಲೆ ಮಾದೇಶ್ವರ ಬೆಟ್ಟಕ್ಕೆ ಅತಿ ಹೆಚ್ಚು ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಹಾಗೂ ಈ ಮಾರ್ಗವು ಅಂತರಾಜ್ಯಕ್ಕೆ ಸೇರಿಕೊಂಡಿದ್ದು ಅತಿ ಹೆಚ್ಚು ವಾಹನಗಳು ಸಂಚರಿಸುತ್ತಿರುವುದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ನಿಗಾ ಇಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Join WhatsApp Join Facebook Live Join Telegram

Tags: