ಕಿಡಿಗೇಡಿಗಳು ಇಟ್ಟ ಬೆಂಕಿಗೆ ಪೆಟ್ಟಿಗೆ ಅಂಗಡಿ ಭಸ್ಮ..

Apr 2, 2025 - 20:57
 2
Facebook Join WhatsApp Join Telegram Live

ಕಿಡಿಗೇಡಿಗಳು ಇಟ್ಟ ಬೆಂಕಿಗೆ ಪೆಟ್ಟಿಗೆ ಅಂಗಡಿ ಭಸ್ಮ..

NewsPin Desk.

ಕೊರಟಗೆರೆ : ಫೈನಾನ್ಸ್ ನಲ್ಲಿ ಸಾಲ ಪಡೆದು ಜೀವನಕ್ಕಾಗಿ ನಿರ್ಮಿಸಿಕೊಂಡಿದ್ದ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಕಾರಣ 60 ಸಾವಿರಕ್ಕೂ ದಿನಸಿ ಪದಾರ್ಥಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ಗೌರಗಾನಹಳ್ಳಿ ಕ್ರಾಸ್ ಬಳಿ ಕಳೆದ 1.5 ವರ್ಷಗಳಿಂದ ಗೌರಗನಹಳ್ಳಿ ಗ್ರಾಮದ ರಂಗನಾಥಯ್ಯ ಕುಟುಂಬ ಪೆಟ್ಟಿಗೆ ಅಂಗಡಿ ನಿರ್ಮಿಸಿಕೊಳ್ಳಲಾಗಿತ್ತು. ಜೀವನೋಪಾಯಕ್ಕೆ ಇದ್ದ ಪೆಟ್ಟಿಗೆ ಅಂಗಡಿ ಕಳೆದುಕೊಂಡು ಬಡ ಕುಟುಂಬ ಬೀದಿಪಾಲಗಿರುವ ಘಟನೆ ನಡೆದಿದೆ.

ಅಂಗಡಿಯಲ್ಲಿದ್ದ 60 ಸಾವಿರ ಬೆಲೆ ಬಾಳುವ ದಿನಸಿ ಪದಾರ್ಥಗಳು ಸುಟ್ಟು ಕರಕಲಾಗಿದ್ದು, ಅಂಗಡಿಗೆ ಬಿದ್ದ ಬೆಂಕಿಯಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು ಗೃಹ ಸಚಿವ ಡಾ.ಜಿ ಪರಮೇಶ್ವರ್‍ರವರ ಗಮನಕ್ಕೆ ತಂದು ನೆರವು ನೀಡುವುದಾಗಿ ಹೂಲೀಕುಂಟೆ ಗ್ರಾ.ಪಂ ಸದಸ್ಯ ಕೇಶವಮೂರ್ತಿ ಭರವಸೆ ನೀಡಿದ್ದಾರೆ. ಸಾರ್ವಜನಿಕರಿಂದ ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

ಈ ವೇಳೆ ಪೆಟ್ಟಿಗೆ ಅಂಗಡಿ ಮಾಲೀಕ ರಂಗನಾಥಯ್ಯ ಮಾತನಾಡಿ, ಕಳೆದ 1.5 ವರ್ಷಗಳ ಹಿಂದೆ ಫೈನಾನ್ಸ್ ನಲ್ಲಿ 60 ಸಾವಿರ ಸಾಲ ಪಡೆದು ಪಟ್ಟಿಗೆ ಅಂಗಡಿ ಹಾಕಿ ಕೊಳ್ಳಲಾಗಿತ್ತು. ಜೀವನೋಪಾಯಕ್ಕೆ ಇದ್ದ ಆಧಾರವು ಸಹ ಭಾನುವಾರ ರಾತ್ರಿ 1:30ರ ಸುಮಾರಿಗೆ ಸುಟ್ಟು ಬೂದಿಯಾಗಿದೆ. ಇದರಿಂದ ನಮ್ಮ ಕುಟುಂಬದ ಪರಿಸ್ಥಿತಿಯು ಸಹ ಬೀದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವರ್ಗ ಪರಿಹಾರದೊಂದಿಗೆ ನೆರವು ನೀಡಬೇಕೆಂದು ನಮ್ಮ ಕುಟುಂಬ ಮನವಿ ಮಾಡಿಕೊಳ್ಳುತ್ತಿದೆ ಎಂದರು.

Join WhatsApp Join Facebook Live Join Telegram

Tags: