ವಿಶ್ವಕರ್ಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ , ವಿದ್ಯಾರ್ಥಿವೇತನ ವಿತರಣೆ

Jan 24, 2025 - 21:07
 168
Facebook Join WhatsApp Join Telegram Live

ವಿಶ್ವಕರ್ಮ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ , ವಿದ್ಯಾರ್ಥಿವೇತನ ವಿತರಣೆ

NewsPin Desk.

ಧಾರವಾಡ : ಧಾರವಾಡ ಜಿಲ್ಲಾ ಶ್ರೀ ವಿಶ್ವಕರ್ಮ  ಎಜುಕೇಶನಲ್ ಟ್ರಸ್ಟ್ ಹಾಗೂ ಶ್ರೀ ಗಾಯತ್ರಿ ಎಜುಕೇಶನ್ ಚಾರಿಟೇಬಲ್ ಟ್ರಸ್ಟಿನ ಸಹಯೋಗದಲ್ಲಿ ಕಳೆದ 23 ವರ್ಷ ಗಳಿಂದ ನೀಡುತ್ತಾ ಬಂದಿರುವ ಡಿಪ್ಲೋಮಾ ಹಾಗೂ ಸ್ನಾತಕೋತರ ವೃತ್ತಿಪರ ತರಗತಿಗಳಲ್ಲಿ ಓದುತ್ತಿರುವ ಜಿಲ್ಲೆಯ ಬಡ ಹಾಗೂ ಪ್ರತಿಭಾವಂತ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿಕೆ ಸಮಾರಂಭ ಜರುಗಿತು.

ನಗರದ ಕಸಬಾ ಗೌಡರ ಓಣಿಯಲ್ಲಿರುವ ಶ್ರೀ ಮೌನೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಜರುಗಿದ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಕೆಎಂಸಿಯ ಸರಕಾರಿ ಶುಶ್ರೂಷ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಶ್ರೀ ಶೈಲ ಎಂ. ಬಡಿಗೇರ ಅವರು ಉದ್ಘಾಟಿಸಿ, "ಇಂದಿನ ಯುವಕರು ಕೇವಲ ಪರೀಕ್ಷೆಗಾಗಿ ಮಾತ್ರ ಓದದೆ, ವೃತ್ತಿಪರ  ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು" ಎಂದರು. ಮುಖ್ಯ ಅತಿಥಿಯಾಗಿದ್ದ ಕಿತ್ತೂರಿನ ಆರ್. ಜಿ. ಎಸ್. ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಇಂಗ್ಲಿಷ್ ಉಪನ್ಯಾಸಕರಾದ ಡಾ. ವೀರೇಂದ್ರ ಜೆ .ಬಡಿಗೇರ ಅವರು, "ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ನೆರವಿಗೆ  ಸಮಾಜದ ಸಂಘ ಸಂಸ್ಥೆಗಳು  ಪ್ರಯತ್ನಿಸುತ್ತಿ ತಿರುವುದು ಸ್ಲಾಘನೀಯವಾಗಿದೆ.   ಈಗ ಹಣಕಾಸು ನೆರವು ಪಡೆಯುವ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ,ಜೀವನದಲ್ಲಿ ಯಶಸ್ಸು ಗಳಿಸಿ, ವರಮಾನ ಪಡೆಯಲು ಆರಂಭಿಸಿದ ಮೇಲೆ, ಸಮಾಜದ  ಮುಂದಿನ ಪೀಳಿಗೆಯವರ ಏಳಿಗೆಗೆ ತಮ್ಮ ಕೈಲಾದಷ್ಟು ನೆರವು ನೀಡುವುದನ್ನು ಮರೆಯಬಾರದು" ಎಂದು ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಿಗ್ಗಾವಿಯ ಖ್ಯಾತ ವೈದ್ಯೆ ಡಾಕ್ಟರ್ ಪದ್ಮಾವತಿ ಎಂ. ಪತ್ತಾರ ಹಾಗೂ ಹುಬ್ಬಳ್ಳಿಯ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯ ಸಂಚಾಲಕರಾದ ಭೀಮಸೇನ ಬಡಿಗೇರ ಅವರು, ಮಕ್ಕಳ ಸಾಧನೆಗೆ ಪ್ರೇರಕವಾದ ಮಾತುಗಳನ್ನಾಡಿದರು.

ವಿಶ್ವಕರ್ಮ ಮಹಾ ಒಕ್ಕೂಟದ ವಿಭಾಗಿಯ  ಅಧ್ಯಕ್ಷರೂ, ದಾನಿಗಳೂ ಆದ ನಿರಂಜನ ಎನ್. ಬಡಿಗೇರ ಅವರು ,ವಿಶ್ವಕರ್ಮ ಎಜುಕೇಶನಲ್ ಟ್ರಸ್ಟಿನ ಕಾರ್ಯ ಚಟುವಟಿಕೆಗಳ "ಪಕ್ಷಿ ನೋಟ" ಕೈಪಿಡಿಯನ್ನು ಬಿಡುಗಡೆ ಮಾಡಿದರು. ಧಾರವಾಡ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ವಸಂತ  ಅರ್ಕಾಚಾರ ಅವರು, ಹುಬ್ಬಳ್ಳಿಯ ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿಯಿಂದ ಪ್ರಕಟಗೊಂಡ "ವಿಶ್ವಕರ್ಮ ಪ್ರಕಾಶ" ಲೇಖನಗಳ ಸಂಗ್ರಹ ಕೃತಿಯನ್ನು ಬಿಡುಗಡೆ ಮಾಡಿದರು. ಶ್ರೀ ಮೌನೇಶ್ವರ ಧರ್ಮ ನಿಧಿ ಸಂಸ್ಥೆ ಅಧ್ಯಕ್ಷರಾದ ಮಹಾರುದ್ರ ಬಿ. ಬಡಿಗೇರ ಮತ್ತು ಪ್ರಕಾಶಕರಾದ ಭೀಮಸೇನ ಬಡಿಗೇರ  ಅವರು ವೇದಿಕೆಯಲ್ಲಿದ್ದರು. ಜಿಲ್ಲಾ ವಿಶ್ವಕರ್ಮ ಎಜುಕೇಶನಲ್ ಟ್ರಸ್ಟಿನ ಅಧ್ಯಕ್ಷ ಸಿ. ಪಿ.  ಮಾಯಾಚಾರಿ ಅಧ್ಯಕ್ಷತೆ ವಹಿಸಿದ್ದರು. 
ಸಭೆಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಕಾಳಪ್ಪ ಬಡಿಗೇರ, ಶ್ರೀ ವಿಶ್ವಕರ್ಮ ಎಜುಕೇಶನಲ್ ಟ್ರಸ್ಟಿನ ಉಪಾಧ್ಯಕ್ಷರುಗಳಾದ ಹುಬ್ಬಳ್ಳಿಯ ಶ್ರೀ ವೀರಣ್ಣ ಪತ್ತಾರ, ನವಲಗುಂದದ ಶ್ರೀ ರವೀಂದ್ರ ಆಚಾರ್ಯ ವಿಶ್ವ ಜ್ಞ, ಹುಬ್ಬಳ್ಳಿ ತಾಲೂಕು ಆಡಳಿತ ಪ್ರತಿನಿಧಿ ಶ್ರೀ ಆರ್. ಕೆ. ಪತ್ತಾರ, ಧಾರವಾಡ ತಾಲೂಕು ಪ್ರತಿನಿಧಿ ಗಳಾದ ಶ್ರೀ ಆರ್. ಸಿ. ನೇಗಿನಾಳ ,  ರಾಜೇಂದ್ರ ಡಿ ಮೇಸ್ತ್ರಿ  ಸೋಮಶೇಖರ ಎನ್ ಅರ್ಕಸಾಲಿ ಹಾಗೂ ಪ್ರಕಾಶ ಬೇಲೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

 ಆರ್.ಕೆ.ಪತ್ತಾರ ಸ್ವಾಗತಿಸಿದರು. ಕಾರ್ಯದರ್ಶಿ ವಸಂತ ಕಿಲ್ಲೇದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಕಾರ್ಯದರ್ಶಿ ರಘುವೀರ ಬಡಿಗೇರ  ವಂದಿಸಿದರು.  ಡಾ. ವಿರುಪಾಕ್ಷ ಬಡಿಗೇರ ಅವರು ಕಾರ್ಯಕ್ರಮ ನಿರೂಪಿಸಿದರು.

Join WhatsApp Join Facebook Live Join Telegram

Tags: