ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಒಂದು ವರ್ಷದ ಸಂತಸ
Join WhatsApp | Join Telegram | Live |

NewsPin Desk.
ಹುಬ್ಬಳ್ಳಿ: ನಗರದ ದುರ್ಗದ ಬೈಲ್‌ನ ಮಹಾತ್ಮಾ ಗಾಂಧೀ ಮಾರ್ಕೇಟ್‌ನಲ್ಲಿ ಅಯೋಧ್ಯೆ ಶ್ರೀ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಿ ಒಂದು ವರ್ಷವಾದ ಪ್ರಯುಕ್ತ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಪ್ರಥಮ ವಾರ್ಷೀಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಹಿಂಪ ಧಾರವಾಡ ವಿಭಾಗ ಗೋರಕ್ಷ ಪ್ರಮುಖರಾದ ವಿಜಯ ಕ್ಷೀರಸಾಗರ, ವಿಹಿಂಪ ಹುಬ್ಬಳ್ಳಿ ಮಹಾನಗರ ಕಾರ್ಯದರ್ಶಿ ರಘು ಯಲ್ಲಮ್ಮನವರ, ವಿಹಿಂಪ ಹುಬ್ಬಳ್ಳಿ ಮಹಾನಗರ ವಿಶೇಷ ಪ್ರಮುಖ ವಿವೇಕ ಮೋಕಾಶಿ, ಗಾಂಧಿ ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷರಾದ ಪ್ರಭು ಅಂಗಡಿ ಇನ್ನಿತರರು ಉಪಸ್ಥಿತರಿದ್ದರು. ಗಂಗನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು, ಗಂಗಾಧರ ಶೆಟ್ಟರ್ ವಂದಿಸಿದರು.
Join WhatsApp | Join Facebook | Live | Join Telegram |