New Fashion Trend : ಯುವತಿಯರನ್ನು ಆಕರ್ಷಿಸುತ್ತಿದೆ ಇಂಡೊ-ವೆಸ್ಟರ್ನ್ ಡಿಸೈನ್‌ನ ಮ್ಯಾಚಿಂಗ್ ಸೀರೆ
New Fashion Trend: ಇಂಡೋ- ವೆಸ್ಟರ್ನ್ ಡಿಸೈನ್‌ನ ಮ್ಯಾಚಿಂಗ್ ಸೀರೆಯ ಬ್ಲೌಸ್ ಫ್ಯಾಷನ್ ಇದೀಗ ಟ್ರೆಂಡಿಯಾಗಿದೆ. ಏನಿದು ಫ್ಯಾಷನ್? ಗ್ಲಾಮರಸ್ ಆಗಿ ಬಿಂಬಿಸುವ ಇವುಗಳ ವಿನ್ಯಾಸಕ್ಕೆ ನೀವು ಮಾಡಬೇಕಾದ್ದೇನು? ಈ ಕುರಿತಂತೆ ಸೀರೆ ಡಿಸೈನರ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.
Join WhatsApp | Join Telegram | Live |
NewsPin Desk.
ಇಂಡೋ-ವೆಸ್ಟರ್ನ್ ಡಿಸೈನ್‌ನ ಮ್ಯಾಚಿಂಗ್ ಸೀರೆ ಬ್ಲೌಸ್ ಫ್ಯಾಷನ್ ಇದೀಗ ಸೀರೆ ಪ್ರಿಯರನ್ನು ಆವರಿಸಿಕೊಂಡಿದೆ.
ಹೌದು. ಇದುವರೆಗೂ ಇಂಡೋ-ವೆಸ್ಟರ್ನ್ ಲುಕ್ ನೀಡುತ್ತಿದ್ದ, ರೆಡಿಮೇಡ್ ಟಾಪ್‌ಗಳ ಜಾಗಕ್ಕೆ ಇದೀಗ ಮತ್ತೊಂದು ಸ್ಟೈಲಿಂಗ್ ಕಾನ್ಸೆಪ್ಟ್ ಸೇರಿಕೊಂಡಿದೆ. (New Fashion Trend) ಅದೇ ಸೀರೆಯಲ್ಲಿ ಲಭ್ಯವಿರುವ ಬ್ಲೌಸನ್ನು ವೆಸ್ಟರ್ನ್ ಲುಕ್‌ನಲ್ಲಿ ವಿನ್ಯಾಸಗೊಳಿಸಿ ಧರಿಸುವುದು ಟ್ರೆಂಡಿಯಾಗಿದೆ. ಇದಕ್ಕೆ ಪೂರಕ ಎಂಬಂತೆ, ನಟಿ ಮಡೋನಾ ಸೆಬಾಸ್ಟಿಯನ್ ಧರಿಸಿದ ವೆಸ್ಟರ್ನ್ ಲುಕ್ ನೀಡುವ ಹಾಲ್ಟರ್ ನೆಕ್‌ನ ಸೀರೆ ಬ್ಲೌಸ್ ಮ್ಯಾಚಿಂಗ್ ಕಾನ್ಸೆಪ್ಟ್, ಯುವತಿಯರನ್ನು ಸೆಳೆದಿದೆ. ಪರಿಣಾಮ, ಇದೀಗ ಡಿಸೈನರ್ ಬ್ಲೌಸ್ ಲೋಕದಲ್ಲಿ ಅಂದರೇ, ಬ್ಲೌಸ್ ಸ್ಟಿಚ್ ಮಾಡುವ ಬೋಟಿಕ್‌ಗಳಲ್ಲಿ ಹಾಗೂ ಬ್ಲೌಸ್ ಡಿಸೈನರ್‌ಗಳ ಲೋಕದಲ್ಲಿ ಇಂತಹ ವಿನ್ಯಾಸಕ್ಕೆ ಬೇಡಿಕೆ ಹೆಚ್ಚಾಗಿದೆ.
ಏನಿದು ಇಂಡೋ-ವೆಸ್ಟರ್ನ್ ಡಿಸೈನ್ ಮ್ಯಾಚಿಂಗ್ ಬ್ಲೌಸ್ :
ಸೀರೆಗಳಿಗೆ ಮೊದಲಿನಿಂದಲೂ ಮ್ಯಾಚಿಂಗ್ ಬ್ಲೌಸ್ ಧರಿಸುವ ಕಾನ್ಸೆಪ್ಟ್ ಎವರ್‌ಗ್ರೀನ್ ಫ್ಯಾಷನ್ ಟ್ರೆಂಡ್‌ನಲ್ಲಿತ್ತು. ಕಾಲ ಕ್ರಮೇಣ, ಈ ಕಾನ್ಸೆಪ್ಟ್ ಬದಲಾಗಿ ಮಿಸ್ ಮ್ಯಾಚ್, ಕಾಂಟ್ರಾಸ್ಟ್, ರೆಡಿಮೇಡ್ ಬ್ಲೌಸ್ ಹೀಗೆ ನಾನಾ ಬಗೆಯಲ್ಲಿ ಸೀರೆ ಪ್ರಿಯರನ್ನು ಸೆಳೆದವು. ಇತ್ತೀಚೆಗೆ, ಬ್ಲೌಸ್ ಡಿಸೈನರ್‌ಗಳು ಯುವತಿಯರಿಗೆ ಸೀರೆಯಲ್ಲೂ ಗ್ಲಾಮರಸ್ ಲುಕ್ ನೀಡುವ ಸಲುವಾಗಿ ಟ್ರೆಡಿಷನಲ್ ಲುಕ್ ನೀಡುವ ಬ್ಲೌಸ್‌ಗಳ ಬದಲಿಗೆ ಇಂಡೋ-ವೆಸ್ಟರ್ನ್ ಲುಕ್ ನೀಡುವ ಬ್ಲೌಸ್ ವಿನ್ಯಾಸವನ್ನು ಪ್ರಯೋಗಾತ್ಮಕವಾಗಿ ಸಿದ್ಧಪಡಿಸಿದರು. ಪರಿಣಾಮ, ಕಾರ್ಪೋರೇಟ್ ಕ್ಷೇತ್ರದ ಹಾಗೂ ಈ ಜನರೇಷನ್ ಹುಡುಗಿಯರನ್ನು ಆಕರ್ಷಿಸಿ ಯಶಸ್ವಿಯಾದವು. ಮ್ಯಾಚಿಂಗ್ ಸೀರೆ ಬ್ಲೌಸ್ ಡಿಸೈನ್‌ನಲ್ಲಿ ಹಿಟ್ ಲಿಸ್ಟ್ ಸೇರಿದವು ಎನ್ನುತ್ತಾರೆ ಬ್ಲೌಸ್ ಡಿಸೈನರ್ ರಜತ್.
ಬ್ಲೌಸ್ ಡಿಸೈನರ್‌ಗಳು ಹೇಳುವುದೇನು?
ಮೊದಲಿನಿಂದಲೂ ಮ್ಯಾಚಿಂಗ್ ಬ್ಲೌಸ್ ಸ್ಟಿಚ್ಚಿಂಗ್ ಕಾನ್ಸೆಪ್ಟ್ ಇದ್ದೇ ಇದೆ. ಆದರೆ, ಇದೀಗ ಇಂದಿನ ಯುವತಿಯರ ಅಭಿಲಾಷೆಯಂತೆ, ವೆಸ್ಟರ್ನ್ ಕ್ರಾಪ್ ಟಾಪ್‌ಗಳಂತೆ ಕಾಣುವ ಬ್ಲೌಸ್ ಸ್ಟಿಚ್ ಮಾಡುವುದು ಹೆಚ್ಚಾಗಿದೆ. ಇದು ನೋಡಲು ಡಿಫರೆಂಟ್ ಲುಕ್ ನೀಡುತ್ತದೆ. ಅಲ್ಲದೇ, ಸಾಮಾನ್ಯ ಬ್ಲೌಸ್‌ಗಳ ಸ್ಟಿಚ್ಚಿಂಗ್‌ಗೆ ಹೋಲಿಸಿದಲ್ಲಿ ಇವುಗಳ ವಿನ್ಯಾಸಕ್ಕೆ ಬೆಲೆ ಹೆಚ್ಚು. ಆದರೂ ಯುವತಿಯರು ಇತ್ತೀಚೆಗೆ, ಈ ವಿನ್ಯಾಸಗಳನ್ನೇ ಪ್ರಿಫರ್ ಮಾಡುತ್ತಿದ್ದಾರೆ ಎನ್ನುತ್ತಾರೆ ಬ್ಲೌಸ್ ಡಿಸೈನರ್ ಸುಧಾ ವರ್ಮಾ.
Join WhatsApp | Join Facebook | Live | Join Telegram |