ಹೊಸಬರ ತಂಡಕ್ಕೆ ಇಳಯರಾಜ ಸಾಥ್

Jan 30, 2025 - 13:20
 10
Facebook Join WhatsApp Join Telegram Live

ಹೊಸಬರ ತಂಡಕ್ಕೆ ಇಳಯರಾಜ ಸಾಥ್

NewsPin Desk.

ಯುವ ಸಿನಿಮಾಸಕ್ತರು ಸೇರಿಕೊಂಡು 'ಬಾಕ್ಸ್ 3 ಸ್ಟುಡಿಯೋಸ್' ಸಂಸ್ಥೆ ಶುರು ಮಾಡಿದ್ದಾರೆ. ಇದರ ಮೂಲಕ ಚಿತ್ರ ನಿರ್ಮಾಣಕ್ಕೆ ಕೂಡಾ ಮುಂದಾಗಿದ್ದಾರೆ. ಸದ್ಯ ಪ್ರೊಡಕ್ಷನ್ ನಂ.! ಹೆಸರಿಡಲಾಗಿದ್ದು, ಸಂಗೀತ ಮಾಂತ್ರಿಕ ಇಳಯರಾಜ ಪೋಸ್ಟರ್‌ನ್ನು ಬಿಡುಗಡೆ ಮಾಡಿರುವುದು ತಂಡಕ್ಕೆ ಹುರುಪು ಬಂದಿದೆ. ಭುವನ್ ಫಿಲಂಸ್ ಅರ್ಪಿಸುತ್ತಿದೆ. ಸಿನಿಮಾಕ್ಕೆ ಬರವಣಿಗೆ, ಚಿತ್ರಕಥೆ, ಸಂಭಾಷಣೆ, ಸಂಗೀತ ಮತ್ತು ನಿರ್ದೇಶನ ಜವಬ್ದಾರಿಯನ್ನು ರಮೇಶ್ ಕೃಷ್ಣ ಹೊತ್ತುಕೊಂಡಿದ್ದಾರೆ.

ಕುಟುಂಬ ಆಧಾರಿತ ಕಥೆಯಲ್ಲಿ ಹಾರರ್ ಅಂಶಗಳು ಇರುವುದರಿಂದ ನಿರ್ದೇಶಕರು ಸಿನಿಮಾದ ಸಾರಾಂಶವನ್ನು ಗೌಪ್ಯವಾಗಿಟ್ಟಿದ್ದಾರೆ. ತಾರಾಗಣದಲ್ಲಿ ಯುವಾನ್‌ದೇವ್, ಛಾಯಾಶ್ರೀ, ನಂಜಪ್ಪ, ಸಿತಾರ ಮುಂತಾದವರು ಅಭಿನಯಿಸುತ್ತಿದ್ದಾರೆ. ಛಾಯಾಗ್ರಹಣ ವೆಂಕಟೇಶ್.ಆರ್. ಕಲೆ ರಾಘು, ನೃತ್ಯ সংজ, ಸಾಹಿತ್ಯ ರಾಮ್ನನಾರಾಯಣ್, ನಿರ್ಮಾಣ ನಿರ್ವಹಣೆ ಮಂಜುನಾಥ್.ಕೆ.ಹೆಚ್ ಅವರದಾಗಿದೆ. ಸದ್ಯ ಹಾಡುಗಳ ರಿರ್ಕಾಡಿಂಗ್ ಮುಗಿದಿದ್ದು, ಮುಂದಿನ ದಿನಗಳಲ್ಲಿ ಶೀರ್ಷಿಕೆ, ಚಿತ್ರೀಕರಣದ ವಿವರವನ್ನು ನೀಡುವುದಾಗಿ ತಂಡವು ಹೇಳಿಕೊಂಡಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ.

Join WhatsApp Join Facebook Live Join Telegram

Tags: