ಮಂಡ್ಯ | ನಂದನ್ ಎಸ್.ರಾಜ್ ಕೊಲೆ ಪ್ರಕರಣ : 6 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Apr 5, 2025 - 11:47
 2
Facebook Join WhatsApp Join Telegram Live

ಮಂಡ್ಯ | ನಂದನ್ ಎಸ್.ರಾಜ್ ಕೊಲೆ ಪ್ರಕರಣ : 6 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

NewsPin Desk.

ಮಂಡ್ಯ: ಪೂರ್ವ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಮಂಡ್ಯ ಸಿಟಿ ಗುತ್ತಲು ಅರ್ಕೇಶ್ವರನಗರ ಜಯಲಕ್ಷ್ಮಿ ಟಾಕೀಸ್ ಮುಂಭಾಗದ 4ನೇ ಕ್ರಾಸ್‌ನಲ್ಲಿರುವ ಕಾಳಮ್ಮ ಮತ್ತು ಮಾರಮ್ಮ ದೇವಸ್ಥಾನದ ಮುಂದೆ ಏ.5, 2019 ರಂದು ಸಂಜೆ 7-50 ಗಂಟೆಯ ಸಮಯದಲ್ಲಿ ನಂದನ್ ಎಸ್.ರಾಜ್ ಎಂಬುವನನ್ನು ಕೊಲೆ ಮಾಡಿದ 6 ಜನ ಆರೋಪಿಗಳಿಗೆ ಮಂಡ್ಯದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಏನಿದು ಘಟನೆ

ನಂದನ್ ಎಸ್.ರಾಜ್ ಎಂಬುವವನ್ನು 6 ಜನ ಆರೋಪಿಗಳಾದ ಚಂದನ್.ಡಿ., ಅಜಯ್‌ಕುಮಾ‌ರ್ ಆ‌ರ್., ಹರ್ಷಿತ್ ಗೌಡ, ಕಿರಣ್ ಅಲಿಯಾಸ್ ಪಿಳ್ಳೆ, ಮನೋಜ್ ಹಾಗೂ ನಾಗರಾಜು ಅಲಿಯಾಸ್ ಬೂದಿನಾಗ ಅವರು ಅಪಾಯಕರ ಆಯುಧಗಳಾದ ಮಚ್ಚು ಲಾಂಗ್, ಚೂರಿ, ಡ್ರಾಗರ್‌ಗಳಿಂದ ಇರಿದು ಕೊಚ್ಚಿ ಕೊಲೆ ಮಾಡಿದ್ದರು.

ಅಕ್ರಮಗುಂಪು ಕಟ್ಟಿಕೊಂಡು ಏಕಾಏಕಿ ಮೃತ ನಂದನ್‌ ಎಸ್‌.ರಾಜ್‌ರವರನ್ನು ಅಟ್ಟಾಡಿಸಿಕೊಂಡು ಡ್ರಾಗರ್‌ನಿಂದ ನಂದನ್ ಎಸ್.ರಾಜ್‌ರವರ ಬೆನ್ನು, ತಲೆ ಮತ್ತು ದೇಹದ ಮೇಲೆ ಹೊಡೆದು ಚುಚ್ಚಿ, ಮಚ್ಚಿನಿಂದ ಭುಜ, ಕುತ್ತಿಗೆ ಮೇಲೆ ಹೊಡೆದುತೀವ್ರ ತರದ ಮಾರಣಾಂತಿಕ ರಕ್ತಗಾಯ ಮಾಡಿ, ಸತ್ತನೆಂದು ಸ್ಥಳದಿಂದ ಪರಾರಿಯಾಗಿದ್ದರು. ಆತನನ್ನು ಸಾಕ್ಷಿಗಳಾದ ಶರತ್ ಮತ್ತು ದಿಲೀಪ್ ಎಂಬುವವರು ಕಾರ್‌ನಲ್ಲಿ ತೆಗೆದುಕೊಂಡು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದರು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 9-01 ಗಂಟೆಯಲ್ಲಿ ನಂದನ್ ಮೃತಪಟ್ಟಿದ್ದನು.

ಈ ಪ್ರಕರಣದ ತನಿಖೆ ಮತ್ತು ಸಾಕ್ಷ್ಯಾಧಾರಗಳಿಂದ ಆರೋಪಿಗಳ ಮೇಲೆ ಭಾರತ ದಂಡ ಸಂಹಿತೆಯ ಹಲವು ಕಲಂ ರೀತ್ಯಾ ದೋಷಾರೋಪಣಾ ಪಟ್ಟಿಯನ್ನು ಅಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಆದ ಮನೋಜ್‌ಕುಮಾರ್ ಸಲ್ಲಿಸಿದ್ದರು.

ಈ ಪ್ರಕರಣವು ಎಸ್.ಸಿ.87/2019 ರಂತೆ (ಮಂಡ್ಯ ಪೂರ್ವ ಠಾಣಾ ಮೊ.ನಂ.32/2019) ರಂತೆ ಮಂಡ್ಯದ ಮಾನ್ಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನಿರ್ಮಲ.ಕೆ ಅವರ ಮುಂದೆ ವಿಚಾರಣೆ ನಡೆದು, 6 ಜನ ಆರೋಪಿಗಳಿಗೆ ಭಾದಂಸಂ ಕಲಂ.302 ಮತ್ತು ಭಾ ದಂ ಸಂ 120(ಬಿ) ರೆ.ವಿ. 149 ರ ಅಡಿಯಲ್ಲಿನ ಅಪರಾಧಕ್ಕೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ತಲಾ 20,000 ರೂ. ದಂಡವನ್ನು ವಿಧಿಸಿದ್ದು. ದಂಡವನ್ನು ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆಯನ್ನು, ಭಾದಂಸಂ ಕಲಂ.143 ರೆ.ವಿ. 149 ರ ಅಡಿಯಲ್ಲಿನ ಅಪರಾಧಕ್ಕೆ 6 ತಿಂಗಳ ಸಾದಾ ಶಿಕ್ಷೆ, 0.147 8.2,149 0 ಅಪರಾಧಕ್ಕೆ 2 ವರ್ಷ ಸಾದಾ ಶಿಕ್ಷೆ, ಭಾ ದಂ ಸಂ.148 ರೆ.ವಿ. 149 0 ಅಪರಾಧಕ್ಕೆ 3 ವರ್ಷಗಳ ಸಾದಾ ಶಿಕ್ಷೆ, ಭಾದಂಸಂ ಕಲಂ.149 ರ ಅಡಿಯಲ್ಲಿನ ಅಪರಾಧಕ್ಕೆ 6 ತಿಂಗಳ ಸಾದಾ ಶಿಕ್ಷೆ, ಭಾದಂಸಂ ಕಲಂ.341 ರೆ.ವಿ. 149 ರ ಅಡಿಯಲ್ಲಿನ ಅಪರಾಧಕ್ಕೆ ಒಂದು ತಿಂಗಳ ಸಾದಾ ಶಿಕ್ಷೆ ವಿಧಿಸಿದ್ದು. ಈ ಎಲ್ಲಾ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸತಕ್ಕದ್ದು ಎಂದು ತೀರ್ಪು ನೀಡಿದ್ದಾರೆ.

ಅಭಿಯೋಜನೆಯ ಪರವಾಗಿ ಸರ್ಕಾರಿ ಅಭಿಯೋಜಕರಾದ ಜಯಶ್ರೀ ಎಸ್.ಶೆಣೈ ಅವರು ವಾದ ಮಂಡಿಸಿದ್ದರು.

Join WhatsApp Join Facebook Live Join Telegram

Tags: