ಖೋವಾ ಫೇಡೆ ಬಾಸುಂದಿಯ ಪರಿಮಳದಿಂದ ಘಮಘಮಿಸೋ‌ ನರಸೋಬಾವಾಡಿಯ ಬೀದಿಗಳು..

Feb 2, 2025 - 07:21
 6
Facebook Join WhatsApp Join Telegram Live

ಖೋವಾ ಫೇಡೆ ಬಾಸುಂದಿಯ ಪರಿಮಳದಿಂದ ಘಮಘಮಿಸೋ‌ ನರಸೋಬಾವಾಡಿಯ ಬೀದಿಗಳು..
ಖೋವಾ ಫೇಡೆ ಬಾಸುಂದಿಯ ಪರಿಮಳದಿಂದ ಘಮಘಮಿಸೋ‌ ನರಸೋಬಾವಾಡಿಯ ಬೀದಿಗಳು..

NewsPin Desk.

???? ಅಮೃತ್ ಜೋಶಿ, ಪತ್ರರ್ತರು.

ಮಹಾರಾಷ್ಟ್ರದ ಸಾಂಗಲಿ ಬಳಿಯ ಶ್ರೀ ದತ್ತಕ್ಷೇತ್ರ ನರಸೋಬಾವಾಡಿ ದೈವಕ್ಷೇತ್ರವಾಗಿ ಪ್ರಸಿದ್ದವಾಗಿಯೇ ಇದೆ...ಜೊತೆಯಲ್ಲಿ ಇಲ್ಲಿನ ಫೇಡೆ ಹಾಗೂ ಬಾಸುಂದಿ ಕೂಡ ಅಷ್ಟೇ ಫೇಮಸ್...

ದೇವಸ್ಥಾನ ಮಾರ್ಗದ ಇಕ್ಕೆಲಗಳಲ್ಲಿ ಇರುವ ಅಂಗಡಿಗಳಲ್ಲಿ ಮಾರಾಟಕ್ಕೆ ಸಿಗುವ ಖೋವಾದಿಂದ ಮಾಡಲಾದ ವಿವಿಧ ಪ್ಲೇವರಗಳ ಫೇಡೆ...ನಮ್ಮ ಧಾರವಾಡ ಫೇಡೆಗಿಂತ ತುಸು‌ ಭಿನ್ನ ...

ಕೃಷಿ ಹಾಗೂ ಹೈನುಗಾರಿಕೆ ಉತ್ತಮವಾಗಿರುವ ಈ ಪ್ರದೇಶದಲ್ಲಿ ಎಲ್ಲೆಡೆ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ಭರಾಟೆ ನೋಡಲು ಸಿಗುತ್ತದೆ.. ಬೆಣ್ಣೆ, ತುಪ್ಪ, ಫೇಡೆ,‌ ಬರ್ಫಿ, ಬಾಸುಂದಿ,‌ ಶ್ರೀಖಂಡ,‌ಇಲ್ಲಿನ ವಿಶೇಷ ಉತ್ಪಾದನೆಗಳು.. ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ಇಲ್ಲಿನ ಫೇಡೆಗಳನ್ನೇ ವಿಶೇಷವಾಗಿ ನೀಡಲಾಗುತ್ತದೆ..

ಇಲ್ಲಿನ ಸಪ್ಪೆ ಫೇಡೆ (ಶುಗರಲೆಸ್) ಕೂಡ ಅಷ್ಟೇ ರುಚಿಕರ.. ಎಲ್ಲ ಅಂಗಡಿಗಳಲ್ಲಿ ವ್ಯಾಪಾರದ ಮಧ್ಯೆದಲ್ಲೇ ಪುರುಷರು ಮಹಿಳೆಯರು ಖೋವಾದಿಂದ ಫ್ರೆಷ್ ಫೇಡೆ ಮಾಡುತ್ತಿರುವ ದೃಶ್ಯಕ್ಕಿಂತ ಅದರ ಘಮಘಮಿಸೋ ಸುವಾಸನೆ ನಿಮ್ಮನ್ನು ಸೆಳೆಯುತ್ತದೆ.. ..

ಅಂದಹಾಗೆ ಬಾಸುಂದಿ ತಿಂದ ಮೇಲೆ ಮುಂದೊಂದು ಅರ್ಧ ಗಂಟೆ ನೀರು ಸಹಿತ ಏನನ್ನೂ ಸೇವಿಸಬೇಡಿ.. ... ಜೈಗುರುದೇವ ದತ್ತ...

Join WhatsApp Join Facebook Live Join Telegram

Tags: